ರಾಜ್ಯಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಶುಲ್ಕ ಜುಲೈ 1ರಿಂದ ಮತ್ತಷ್ಟು ಹೆಚ್ಚಳ: ಯಾವ ವಾಹನಕ್ಕೆ ಎಷ್ಟು ಇಲ್ಲಿದೆ ಮಾಹಿತಿ...
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಓಡಾಡುವವರು ನಾಳೆ ಜುಲೈ 1ರಿಂದ ಹೆಚ್ಚಿನ ಟೋಲ್ ದರ ಪಾವತಿಸಬೇಕಾಗುತ್ತದೆ. ಕಾರಿನಲ್ಲಿ ಸಂಚರಿಸುವವರು ಏಕಮುಖ ಸಂಚಾರಕ್ಕೆ 320 ರೂಪಾಯಿ ಹಾಗೂ ಪ್ರಯಾಣಿಕರು 24 ತಾಸಿನೊಳಗೆ ಹಿಂತಿರುಗುವುದಾದರೆ ದ್ವಿಮುಖ ಸಂಚಾರಕ್ಕೆ 485 ರೂಪಾಯಿ ಪಾವತಿಸಬೇಕಾಗುತ್ತದೆ.