Tirumala Temple

ತಿರುಪತಿ ತಿಮ್ಮಪ್ಪನಿಗೆ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲೇ ನಡೆಯುವುದೇಕೆ? ಈ ವಿಶೇಷ ಗೌರವ ಸಿಕ್ಕಿದ್ದು ಹೇಗೆ? ಬಹುತೇಕರಿಗೆ ಗೊತ್ತಿಲ್ಲದ ಇತಿಹಾಸ ಇಲ್ಲಿದೆ...
ವಿಜಯನಗರ ಸಾಮ್ರಾಜ್ಯದ ಪತನದ ಬಳಿಕವೂ ಕರ್ನಾಟಕದ ರಾಜವಂಶಗಳು ಹಾಗೂ ಮೈಸೂರು ಸಂಸ್ಥಾನ ತಿರುಮಲದೊಂದಿಗೆ ತಮ್ಮ ಸಂಬಂಧವನ್ನು ಮುಂದುವರಿಸಿದವು. ದೇವಸ್ಥಾನದ ನಿತ್ಯ ಕೈಂಕರ್ಯ, ಪೂಜೆ ಹಾಗೂ ಸೇವೆಗಳಿಗಾಗಿ ಅನೇಕ ದತ್ತಿಗಳು ಮತ್ತು ಆರ್ಥಿಕ ನೆರವು ನೀಡಲಾಯಿತು.

ತಿರುಪತಿ ತಿಮ್ಮಪ್ಪನಿಗೆ 100 ಕೆಜಿ ಅಖಂಡ ಬೆಳ್ಳಿ ದೀಪ ಅರ್ಪಿಸಿದ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ
ಭಕ್ತಿ ಮತ್ತು ರಾಜ ಪರಂಪರೆಯ ಸಂಕೇತವಾಗಿ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಎರಡು ದೊಡ್ಡ ಬೆಳ್ಳಿ ದೀಪಗಳನ್ನು ದಾನ ಮಾಡಿದರು.

ತಿರುಮಲ: ವೆಂಕಟೇಶ್ವರ ದೇವಾಲಯದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ- ಸಿಎಂ ಚಂದ್ರಬಾಬು ನಾಯ್ಡು
ತಿರುಮಲ ದೇಗುಲದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು. ಸದ್ಯ ಬೇರೆ ಧರ್ಮದ ವ್ಯಕ್ತಿಗಳು ಕೆಲಸ ಮಾಡುತ್ತಿದ್ದರೆ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಿರುಮಲ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ; ಟಿಟಿಡಿ ಹೊರಗುತ್ತಿಗೆ ಸಿಬ್ಬಂದಿ ಬಂಧನ
ಕಳೆದ ಒಂದು ವರ್ಷದಲ್ಲಿ 10 ರಿಂದ 15 ಬಾರಿ ಬಿಸ್ಕೆಟ್ ಮತ್ತು ಆಭರಣಗಳ ರೂಪದಲ್ಲಿ ರೂ. 46 ಲಕ್ಷ ಮೌಲ್ಯದ 650 ಗ್ರಾಂ ಚಿನ್ನವನ್ನು ಕದ್ದ ಆರೋಪದ ಮೇಲೆ 40 ವರ್ಷದ ವಿ. ಪೆಂಚಲಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಎಚ್‌ಡಿ ಕುಮಾರಸ್ವಾಮಿ; ಕೇಂದ್ರ ಸಚಿವನಾಗಿ ಯಶಸ್ವಿಯಾಗಲು ಶಕ್ತಿ ನೀಡುವಂತೆ ಪ್ರಾರ್ಥನೆ!
ಕೇಂದ್ರದ ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಶನಿವಾರ ಬೆಳಗ್ಗೆ ಆಂಧ್ರ ಪ್ರದೇಶದ ತಿರುಮಲ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಕೇಂದ್ರ ಸರ್ಕಾರದ ಸಚಿವರಾಗಿ ತಮ್ಮ ಕೆಲಸ ಯಶಸ್ವಿಯಾಗಲು ತಿಮ್ಮಪ್ಪನ ಆಶೀರ್ವಾದ ಕೋರಿದರು.

ತಿರುಪತಿಗೆ ನಂದಿನಿ ತುಪ್ಪ ಸ್ಥಗಿತ: ಕೆಎಂಎಫ್ ಆರೋಪ ತಿರಸ್ಕರಿಸಿದ ಟಿಟಿಡಿ; 'ವರ್ಷದ ಹಿಂದಿನ ವಿಚಾರ' ಎಂದ ಸಿಎಂ ಸಿದ್ದರಾಮಯ್ಯ
ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಅನುಮತಿ ನೀಡಿಲ್ಲ ಎಂಬ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಟಿಟಿಡಿ ಮಂಗಳವಾರ ಸ್ಪಷ್ಟಪಡಿಸಿದೆ.

ತಿರುಪತಿಗಿಲ್ಲ ಕರ್ನಾಟಕದ ನಂದಿನಿ ತುಪ್ಪ: ಮತ್ತೆ ಏನಿದು ಗೊಂದಲ? ಟಿಟಿಡಿ ಹೇಳಿದ್ದೇನು? 'ವರ್ಷದ ಹಿಂದಿನ ವಿಚಾರ' ಎಂದು ಸಿಎಂ ಹೇಳಿದ್ದೇಕೆ?
ವಿಶ್ವ ವಿಖ್ಯಾತ ತಿರುಪತಿ ತಿರುಮಲ ದೇಗುಲದಲ್ಲಿನ ಲಡ್ಡು ಪ್ರಸಾದಕ್ಕೆ ಕರ್ನಾಟಕದ ನಂದಿನಿ ತುಪ್ಪದ ಬಳಕೆ ವಿಚಾರವಾಗಿ ಮತ್ತೆ ಗೊಂದಲ ಸೃಷ್ಟಿಯಾಗಿದ್ದು, ವರ್ಷಗಳ ಹಿಂದೆಯೇ ಟಿಟಿಡಿ ನಂದಿನಿ ತುಪ್ಪ ಬಳಕೆಯನ್ನು ಸ್ಥಗಿತಗೊಳಿಸಿದ್ದರೂ ಈ ಕುರಿತು ಸುದ್

ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ: ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ
ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್ನನ್ನು ಬಿಡುಗಡೆ ಮಾಡಿದೆ.

ನಿನ್ನೆ ಒಂದೇ ದಿನ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ 4.39 ಕೋಟಿ ರೂ. ಸಂಗ್ರಹ
ವೈಕುಂಠ ಏಕಾದಶಿಯ ದಿನವಾದ ನಿನ್ನೆ (ಡಿ 25ರ ಶುಕ್ರವಾರದಂದು) ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.

