ರಾಜ್ಯಬಿಜೆಪಿಯವರಿಗೆ ಅಷ್ಟು ದೇಶಭಕ್ತಿಯಿದ್ದರೆ ಉಚಿತವಾಗಿ ತ್ರಿವರ್ಣ ಧ್ವಜ ಹಂಚಲಿ, ಇವರು ಕೇವಲ ಪ್ರಚಾರಪ್ರಿಯರು: ಶಿವರಾಜ್ ತಂಗಡಗಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿಯವರು ಮಾಡುತ್ತಿರುವ ಹರ್ ಘರ್ ತಿರಂಗ ಕಾರ್ಯಕ್ರಮ ನಿಜವಾದ ದೇಶಭಕ್ತಿಯಿಂದ ಎಂದು ನನಗೆ ಅನಿಸುತ್ತಿಲ್ಲ. ತ್ರಿವರ್ಣ ಧ್ವಜಕ್ಕಿದ್ದ ಗೌರವ, ನಿಯಮಕ್ಕಿದ್ದ ಗೌರವವನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ.