ರಾಜ್ಯಕಳೆದ 20 ವರ್ಷಗಳಲ್ಲಿ ಹುಲಿ ವಾಸ ಪ್ರದೇಶ ಶೇ.30ರಷ್ಟು ಏರಿಕೆ; ಅಧ್ಯಯನ ವರದಿ
ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ 'ಜನರು ಮತ್ತು ಬಡತನದ ಮಧ್ಯೆ ಹುಲಿಗಳ ಚೇತರಿಕೆ' ಎಂಬ ಅಧ್ಯಯನವು ಕಳೆದ ಎರಡು ದಶಕಗಳಲ್ಲಿ ಹುಲಿ ಆಕ್ರಮಿತ ಪ್ರದೇಶವು ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಹುಲಿಗಳು ಈಗ ಅರಣ್ಯದ ಒಳಭಾಗಗಳನ್ನು ಸಂತಾನೋತ್ಪತ್ತಿ ಸ್ಥಳಗಳಾಗಿ ಬಳಸುತ್ತಿವೆ ಮತ್ತು ತಮ್ಮ ಪ್ರದೇಶವನ್ನು ವಿಸ್ತರಿಸುತ್ತಿವೆ ಎಂದು ಅಧ್ಯಯನವು ಹೇಳಿದೆ.