ರಾಜ್ಯವೈಯಕ್ತಿಕ ಫೋಟೋಗಳೊಂದಿಗೆ ಮಹಿಳೆಗೆ ಬೆದರಿಕೆ, ಚೆನ್ನೈನಲ್ಲಿ ಆರೋಪಿ ಬಂಧನ
ವೈಯಕ್ತಿಕ ಫೋಟೋಗಳೊಂದಿಗೆ ಮಹಿಳೆಗೆ ಬೆದರಿಕೆ ಹಾಕಿದ್ದ 26 ವರ್ಷದ ಅಸ್ಸಾಂ ಮೂಲದ ಯುವಕನೊಬ್ಬನನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಅಮೀರ್ ಹುಸೇನ್ ಫೈಸಲ್ ಬಂಧಿತ ಆರೋಪಿಯಾಗಿದ್ದಾನೆ.