ರಾಜ್ಯಮುಂಜಾನೆ ವೇಳೆ ಹೆಚ್ಚುತ್ತಿರುವ ಅಪಘಾತ: ರಾತ್ರಿ ಪಾಳಿ ಚಾಲಕರಿಗೆ ಥರ್ಮೋ ಫ್ಲಾಸ್ಕ್ ನೀಡಲು ಕೆಎಸ್ಆರ್ ಟಿಸಿ ಮುಂದು!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಅಥವಾ ಚಾಲನೆ ಮಾಡುವ ಚಾಲಕರಿಗೆ ಉತ್ತಮ ಗುಣಮಟ್ಟದ 500 ಮಿಲಿಯ ಥರ್ಮೋ ಫ್ಲಾಸ್ಕ್ ನೀಡಲು ನಿಗಮ ಮುಂದಾಗಿದೆ.