ದೇಶಆರು ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ; ಟ್ವೀಟ್ ಗೆ ಟೀಕೆ
ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೋಮವಾರ ಮಾಡಿರುವ ಟ್ವೀಟ್ ವೊಂದು ವಿವಾದಕ್ಕೆ ಕಾರಣವಾಗಿದೆ. ''ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ''? ಎಂಬ ಶೀರ್ಷಿಕೆಯಲ್ಲಿ ಆರು ಮಹಿಳಾ ಸಂಸದರ ಜೊತೆಗಿನ ಸೆಲ್ಫಿ ಫೋಸ್ಟ್ ಇದಾಗಿದ್ದು, ಅನೇಕ ನೆಟ್ಟಿಗರು ಸೆಕ್ಸಿಸಂ ಎಂದು ಆರೋಪಿಸಿದ್ದಾರೆ.