ರಾಜ್ಯವಂದೇ ಭಾರತ್ ಎಕ್ಸ್ಪ್ರೆಸ್ ಸ್ಲೀಪರ್ ಕೋಚ್ ನಿರ್ವಹಣೆಗೆ ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದಲ್ಲಿ ಹೊಸ ಡಿಪೋ ನಿರ್ಮಾಣ
ಬೆಂಗಳೂರು ರೈಲ್ವೆ ವಿಭಾಗವು ವಂದೇ ಭಾರತ್ನ ಸ್ಲೀಪರ್ ಕೋಚ್ಗಳನ್ನು ನಿರ್ವಹಿಸಲು ಥಣಿಸಂದ್ರ ರೈಲು ನಿಲ್ದಾಣದ ಬಳಿ 270 ಕೋಟಿ ರೂ. ವೆಚ್ಚದಲ್ಲಿ ಹೊಸ ಡಿಪೋ-ಕಮ್-ವರ್ಕ್ಶಾಪ್ ಅನ್ನು ನಿರ್ಮಿಸಲಿದೆ ಎಂದು ಬೆಂಗಳೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ಪುರಿ ಪ್ರಕಟಿಸಿದ್ದಾರೆ.