ರಾಜ್ಯಗದಗ ಜಿಲ್ಲೆ: ತಾಂಡಾಗಳು ನಿಯಂತ್ರಿತ ಪ್ರದೇಶಗಳಾಗಿ ಘೋಷಣೆ
ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗದಗ ತಾಲೂಕಿನ ಅಡವಿ ಸೋಮಾಪುರ, ಪಾಪನಾಶಿ ತಾಂಡಾಗಳು ಹಾಗೂ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ, ಡೋಣಿ ತಾಂಡಾಗಳ ಸುತ್ತಲಿನ 500 ಮೀಟರ್ ಪ್ರದೇಶವನ್ನು ಮುಂದಿನ ಆದೇಶದವರೆಗೆ ನಿಯಂತ್ರಿತ ಪ್ರದೇಶಗಳೆಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿ ಭೌತಿಕ ನಿಬಂಧನೆಗಳನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.