ಅಂಕಣಗಳುಟೆಕ್ಸ್ಟ್ ನೆಕ್ ಸಿಂಡ್ರೋಮ್ ಬಾಧಿಸುತ್ತಿದೆಯೇ? (ಕುಶಲವೇ ಕ್ಷೇಮವೇ)
ಸಂವಹನವನ್ನು ಅತ್ಯಂತ ಸುಲಭವಾಗಿಸಿದ ಕೀರ್ತಿ ಮೊಬೈಲ್ ಫೋನಿಗಿದೆ. ಹಲವಾರು ಉಪಯುಕ್ತ ಅಪ್ಲಿಕೇಷನ್ನುಗಳಿಂದ ಮೊಬೈಲ್ ಫೋನುಗಳು ಕಿರಿಯರ, ಹಿರಿಯರ ಎಲ್ಲರ ಮನ ಗೆದ್ದಿವೆ. ಒಂದು ಸಂಶೋಧನೆಯ ಪ್ರಕಾರ ಇಂದು ಸಾಮಾನ್ಯ ಜನರು ಫೋನ್ ಸ್ಕ್ರೀನ್ಗಳನ್ನು ನೋಡುತ್ತಾ ಸರಾಸರಿ ಏಳು ಗಂಟೆಗಳ ಕಾಲ ಕಳೆಯುತ್ತಾರೆ.