ಕ್ರಿಕೆಟ್ಲಯ ಕಳೆದುಕೊಂಡಿರುವ ರಿಷಭ್ ಪಂತ್ ಗೆ ಅಜಿಂಕ್ಯಾ ರೆಹಾನೆ ಕೊಟ್ಟ ಸಲಹೆ ಏನು ಗೊತ್ತೇ?
ಈವರೆಗೂ ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಯ್ಕೆಯಾಗಿದ್ದ ರಿಷಭ್ ಪಂತ್ ಇತ್ತೀಚಿನ ದಿನಗಳಲ್ಲಿ ಲಯ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮ ನಿಗದಿತ ಓವರ್ ಗಳ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಟೆಸ್ಟ್ ನಲ್ಲಿ ವೃದ್ಧಿಮಾನ್ ಸಾಹ ಪಂತ್ ಗೆ ಪರ್ಯಾಯವಾಗಿ ಕಾಣುತ್ತಿದ್ದಾರೆ.