ರಾಜ್ಯಬೆಂಗಳೂರು: ಸರ್ಕಾರಿ ಉದ್ಯೋಗದ ಆಮಿಷ ತೋರಿ ಶಿಕ್ಷಕರಿಗೆ 98 ಲಕ್ಷ ರೂ. ದೋಖಾ, ದೂರು ದಾಖಲು
ಸರ್ಕಾರಿ ನೌಕರಿ ಸಿಗಲಿದೆ ಎಂಬ ಆಸೆಯಿಂದ ಲಕ್ಷ ಲಕ್ಷ ಹಣ ನೀಡಿದ್ದ 80 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು,ಈಗ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ವಂಚನೆಗೆ ಒಳಗಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಸದ್ಯ ಈ ಶಿಕ್ಷಕರು ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ಧ ದೊಡ್ಡಬಳ್ಳಾಪುರ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.