ದೇಶಸತತ ಮೂರನೇ ದಿನ ಬಿಬಿಸಿ ಕಚೇರಿಯಲ್ಲಿ ಮುಂದುವರಿದ ತೆರಿಗೆ ಸಮೀಕ್ಷೆ: ರಾಜಕೀಯ ಸೇಡು ಎಂದು ಟೀಕಿಸಿದ ವಿಪಕ್ಷಗಳು
ಭಾರತದಲ್ಲಿರುವ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೋಧನೆ ಸತತ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ಅಧಿಕಾರಿಗಳು ಆಯ್ದ ಸಿಬ್ಬಂದಿಗಳಿಂದ ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಿದ್ದು, ಬಿಬಿಸಿ ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಲೆಕ್ಕಪತ್ರಗಳ ದಾಖಲೆ ಪ್ರತಿಗಳನ್ನು ಪಡೆದುಕೊಂಡಿದ್ದಾರೆ.