Tawang face off

ಸಂಸತ್ತು ಕಲಾಪ: ಭಾರತ-ಚೀನಾ ಸಂಘರ್ಷ ಕುರಿತು ಇಂದು ಮತ್ತೆ ಲೋಕಸಭೆಯಲ್ಲಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡನೆ
ಭಾರತ-ಚೀನಾ ಗಡಿಯ ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಎರಡೂ ಕಡೆಯ ಸೈನಿಕರ ಘರ್ಷಣೆ, ಸೈನಿಕರಿಗೆ ಉಂಟಾಗಿರುವ ಗಾಯ, ಅಲ್ಲಿನ ಪರಿಸ್ಥಿತಿ ಬಗ್ಗೆ ನಿನ್ನೆ ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ತೃಪ್ತರಾಗದ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ಸಂಸದರು ಕಲಾಪ ಬಹಿಷ್ಕರಿಸಿ ಹೊರನಡೆದಿದ್ದರು.

ತವಾಂಗ್ ಘರ್ಷಣೆಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿಲ್ಲ, ಗಂಭೀರ ಗಾಯಗಳೂ ಆಗಿಲ್ಲ; ಭಾರತ ತಕ್ಕ ಉತ್ತರ ನೀಡುತ್ತದೆ: ರಾಜನಾಥ್ ಸಿಂಗ್
ಭಾರತ ಮತ್ತು ಚೀನಾ ಸೈನಿಕರ ನಡುವೆ ತವಾಂಗ್ ನ ಯಾಂಗ್ಟ್ಸೆ ಪ್ರದೇಶದಲ್ಲಿ ನಡೆದ ಘರ್ಷಣೆಯ ಕುರಿತು ಲೋಕಸಭೆಗೆ ಇಂದು ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದರು. ನಮ್ಮ ಸೈನಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

