ರಾಜ್ಯ'ಕಾವೇರಿ'ಗಾಗಿ ಬೆಂಗಳೂರು ಬಂದ್: ತಮಿಳುನಾಡು ಬಸ್ ಸೇವೆಗೆ ಅಡ್ಡಿ, ಪ್ರಯಾಣಿಕರು, ಐಟಿ ಉದ್ಯೋಗಿಗಳಿಗೆ ತೊಂದರೆ!
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ನಡೆಸುತ್ತಿರುವ 'ಬೆಂಗಳೂರು ಬಂದ್' ಹಿನ್ನೆಲೆಯಲ್ಲಿ ತಮಿಳುನಾಡು - ಕರ್ನಾಟಕ ನಡುವಿನ ಬಸ್ ಸೇವೆಗೆ ಅಡ್ಡಿಯಾಗಿದೆ. ತಮಿಳುನಾಡಿನ ಹಲವಾರು ಬಸ್ಗಳನ್ನು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಜುಜುವಾಡಿಯಲ್ಲಿ ನಿಲ್ಲಿಸಲಾಗುತ್ತಿದೆ.