ರಾಜ್ಯ'ಶಕ್ತಿ' ಯೋಜನೆ ವಿರೋಧಿಸಿ ಬೆಂಗಳೂರು ಬಂದ್: ಪಟ್ಟು ಬಿಡದ ಸಾರಿಗೆ ಸಂಘಗಳ ಒಕ್ಕೂಟ, ಸಂಧಾನ ಸಭೆ ವಿಫಲ
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಕರೆ ನೀಡಿರುವ ಸೆ.11ರ ಬೆಂಗಳೂರು ಸಾರಿಗೆ ಬಂದ್'ಗೆ ಸಂಬಂಧಿಸಿದಂತೆ ಗುರುವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಒಕ್ಕೂಟದ ಸದಸ್ಯರ ನಡುವಿನ ಸಂಧಾನಸಭೆ ವಿಫಲಗೊಂಡಿದೆ. ಹೀಗಾಗಿ ಅಂದು ಸಾರಿಗೆ ಬಂದ್ ನಡೆಯುವುದು ಖಚಿತವಾಗಿದ್ದು, ಬೆಂಗಳೂರಿನಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.