ರಾಜ್ಯಗದಗ: ಸ್ಮಶಾನ ಇಲ್ಲವೆಂದು ಮೃತದೇಹವನ್ನು ತಹಶಿಲ್ದಾರ್ ಕಚೇರಿಗೆ ಕೊಂಡೊಯ್ದ ಗ್ರಾಮಸ್ಥರು!
ಹಲವು ಗ್ರಾಮಗಳಲ್ಲಿ ಹಲವು ಸಮಸ್ಯೆಗಳಿರುತ್ತವೆ. ರಸ್ತೆ, ಆಸ್ಪತ್ರೆ, ಶಾಲೆ, ಮೂಲಭೂತ ಸೌಕರ್ಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿರುತ್ತವೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹರಿಪುರ ಗ್ರಾಮದ ಜನತೆಯದ್ದು ಬೇರೆಯದ್ದೇ ಸಮಸ್ಯೆ. ಯಾರಾದರು ಸತ್ತರೆ ಸುಡಲು ಅಥವಾ ಹೂಳಲು ಎರಡಡಿ ಜಾಗವೇ ಇಲ್ಲ.