Tablighi Jamaat event

ತಬ್ಲಿಘಿ ಕಾರ್ಯಕ್ರಮಕ್ಕೆ ಓರ್ವ ಐಎಎಫ್ ಸಿಬ್ಬಂದಿ ಭೇಟಿ? 3 ಮಂದಿ ಕ್ವಾರಂಟೈನ್ ಗೆ, ತನಿಖೆ!
ಲಾಕ್ ಡೌನ್ ನ್ನೂ ಲೆಕ್ಕಿಸದೇ ತಬ್ಲಿಘಿ ಜಮಾತ್ ಕಾರ್ಯಕ್ರಮ ನಡೆಯುತ್ತಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರದೇಶಕ್ಕೆ ಅದೇ ದಿನ ಭಾರತೀಯ ವಾಯುಪಡೆ (ಐಎಎಫ್) ನ ಓರ್ವ ಸಿಬ್ಬಂದಿ ಭೇಟಿ ನೀಡಿದ್ದರು. ಪರಿಣಾಮ ಈಗ ಇಂಡಿಯನ್ ಏರ್ ಫೋರ್ಸ್ ನ ಮೂವರು ಸಿಬ್ಬಂದಿಗಳನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ.

ಕೊವಿಡ್-19: ತಮಿಳುನಾಡಿನಲ್ಲಿ 75 ಹೊಸ ಪ್ರಕರಣ ಪತ್ತೆ, ಈ ಪೈಕಿ 74 ಮಂದಿ ಜಮಾತ್ ಸಭೆಯಲ್ಲಿ ಭಾಗಿ
ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವಿಶೇಷವಾಗಿ ತಮಿಳುನಾಡಿನಲ್ಲಿ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ ಮತ್ತೆ 75 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.

