ರಾಜಕೀಯವಿಧಾನಸಭಾ ಚುನಾವಣೆ: ಹಾಸನ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಭವಾನಿ ರೇವಣ್ಣ, ಸ್ವರೂಪ್ ಮುಂದು!
ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮತ್ತು ಅವರ ಸಹೋದರ ಎಚ್ಡಿ ರೇವಣ್ಣ ಮುಂದುವರೆದಿದ್ದು, ಇದರ ನಡುವಲ್ಲೇ ಭವಾನಿ ರೇವಣ್ಣ ಹಾಗೂ ಎಚ್ಪಿ ಸ್ವರೂಪ್ ಇಬ್ಬರೂ ಒಂದೇ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.