ರಾಜ್ಯಗಂಟಲು ದ್ರವ ಪರೀಕ್ಷೆ ದರ ಇಳಿಕೆ ಮಾಡಲು ಟಾಸ್ಕ್ ಪೋರ್ಸ್ ಸಭೆ ನಿರ್ಧಾರ: ಡಿಸಿಎಂ ಅಶ್ವತ್ ನಾರಾಯಣ
ಗಂಟಲು ದ್ರವ ಪರೀಕ್ಷೆ ದರವನ್ನು ಇಳಿಕೆ ಮಾಡಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ ನಿಂದ 1500 ರೂ.ಗೆ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ. ಗೆ ಇಳಿಸಲಾಗಿದೆ ಎಂದು ಕಾರ್ಯಪಡೆ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ತಿಳಿಸಿದರು.