ನಿಯಮಿತ ಮತ್ತು ವೃತ್ತಿಪರವಾಗಿ ಯೋಗ ಮಾಡಿದರೆ ಡಯಾಬಿಟಿಸ್ ಅಥವಾ ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು. ಕಳೆದ ಹಲವು ವರ್ಷಗಳಿಂದ ಈ ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಬೆಂಗಳೂರಿನ ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಇದನ್ನು ದೃಢಪಡಿಸಿದೆ.