ಅಶಿಸ್ತಿನ ವರ್ತನೆ ಪ್ರದರ್ಶಿಸಿದ್ದಕ್ಕಾಗಿ ಇದೇ ಮಾರ್ಚ್ ೫ ರಂದು ಏಳು ಕಾಂಗ್ರೆಸ್ ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತ್ತುಗೊಳಿಸಲು ಕೈಗೊಂಡಿದ್ದ ತೀರ್ಮಾನವನ್ನು ಲೋಕಸಭೆ ಬುಧವಾರ ರದ್ದುಪಡಿಸಿದೆ.