ಸಿನಿಮಾ ಸುದ್ದಿರಾಧಾಕೃಷ್ಣ ಪಲ್ಲಕಿ ನಿರ್ದೇಶನದ ವೀರ್ ಸಾವರ್ಕರ್ ಬಯೋಪಿಕ್ನಲ್ಲಿ ಸುನೀಲ್ ರಾವ್ ಜೋಡಿಯಾಗಿ ಜಾನ್ವಿಕಾ ಕಲಕೇರಿ
ನಿರ್ದೇಶಕ ರಾಧಾಕೃಷ್ಣ ಪಲ್ಲಕಿ ಅವರ ವೀರ್ ಸಾವರ್ಕರ್ (ವಿನಯ ಕೆ ದಾಮೋದರ್ ಸಾವರ್ಕರ್) ಬಯೋಪಿಕ್ನಲ್ಲಿ ನಟ ಸುನೀಲ್ ರಾವ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡದ ಇತ್ತೀಚಿನ ಅಪ್ಡೇಟ್ ಏನೆಂದರೆ, ವೀರ್ ಸಾವರ್ಕರ್ ಅವರ ಪತ್ನಿ ಯಮುನಾಬಾಯಿ ಪಾತ್ರದಲ್ಲಿ ನಟಿ ಜಾನ್ವಿಕಾ ಕಲಕೇರಿ ಕಾಣಿಸಿಕೊಳ್ಳಲಿದ್ದಾರೆ.