ರಾಜ್ಯದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ತಾಲೂಕಿನ ಸಂಪಾಜೆ ಮತ್ತು ಸಮೀಪದ ಅರಂತೋಡು, ತೊಡಿಕಾನ, ಚೆಂಬು ಮತ್ತು ಕಲ್ಲಪಲ್ಲಿ ನಿವಾಸಿಗಳು ಬೆಳಗ್ಗೆ 6.23ಕ್ಕೆ ಕಂಪಿಸಿದ ಅನುಭವವಾಗಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.