ದೇಶತಿಹಾರ್ ಜೈಲಿನಲ್ಲಿ ರಾತ್ರಿ ಕಳೆದ ಅರವಿಂದ ಕೇಜ್ರಿವಾಲ್, ವೈದ್ಯಕೀಯ ಪರೀಕ್ಷೆಯಲ್ಲಿ ಕಡಿಮೆ ಸಕ್ಕರೆ ಮಟ್ಟ ಪತ್ತೆ!
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. 14X8 ಅಡಿ ಸೆಲ್ನಲ್ಲಿದ್ದ ಅವರು, ತಮ್ಮ ಸೆಲ್ನಲ್ಲೇ ನಡೆದಾಡುತ್ತಿದ್ದರು ಮತ್ತು ಸ್ವಲ್ಪ ಸಮಯ ಮಾತ್ರ ನಿದ್ರಿಸಿದರು ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.