ರಾಜ್ಯಸಕ್ಕರೆ ಆಯುಕ್ತಾಲಯ ಕಚೇರಿ ಅ.3ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ: ಸಿಎಂ ಬೊಮ್ಮಾಯಿ
ರೈತರು ಹಾಗೂ ಉತ್ತರ ಕರ್ನಾಟಕ ಜನರ ಬೇಡಿಕೆಯಾಗಿರುವ ಸಕ್ಕರೆ ಆಯುಕ್ತಾಲಯ ಕಚೇರಿಯನ್ನು ಅಕ್ಟೋಬರ್ 3 ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.