ರಾಜ್ಯನಗರದಲ್ಲಿರುವ 404 ಕಟ್ಟಡಗಳು ದುರ್ಬಲ: ಬಿಬಿಎಂಪಿ ಸಮೀಕ್ಷೆಯಲ್ಲಿ ಬಹಿರಂಗ
ಕಳೆದ ಎರಡು ವರ್ಷಗಳಿಂದ ಹಚಿನ್ಸ್ ರಸ್ತೆಯ ನಿವಾಸಿಗಳು ನಗರದಲ್ಲಿ ಕೇಳಿಬರುತ್ತಿರುವ ಕಟ್ಟಡ ಕುಸಿತದ ಸುದ್ದಿಗೆ ಬೆಚ್ಚಿ ಬೀಳುತ್ತಾರೆ. ಇಲ್ಲಿ ಜುಲೈ 2019 ರಲ್ಲಿ ಎರಡು ಅಪಾರ್ಟ್ ಮೆಂಟ್ ಕಟ್ಟಡಗಳು ಕುಸಿದಿದ್ದು, ಇದರಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟ ಘಟನೆ ಇನ್ನೂ ಕಾಡುತ್ತಿದೆ.