ಸಂಚಯಟ್ಯಾಗೋರ್ ಕಾದಂಬರಿಗಳ ರೆಬೆಲ್ ನಾಯಕಿಯರು: ಲೈಂಗಿಕತೆಯ ತುಮುಲದಲ್ಲಿರುವ ವಿಧವೆ ಬಿನೋದಿನಿ
ಟಾಗೋರರ ನಾಯಕಿಯರು ಚಲನಚಿತ್ರಗಳಲ್ಲಿ ತೋರಿಸುವಂತೆ ಸೈಡ್ ಲೈನಿನಲ್ಲಿ ಬರುವುದಿಲ್ಲ. ಅವಳೇ ನಾಯಕ ಹಾಗೂ ನಾಯಕಿ. ಅವಳು ತನ್ನ ರಕ್ಷಣೆಗೆ ನಾಯಕನ ಆಗಮನಕ್ಕಾಗಿ ಕಾಯುವುದಿಲ್ಲ- ತಾನೇ ಹೋರಾಡುತ್ತಾಳೆ. ಅನುರಾಗ್ ಬಸು ನಿರ್ದೇಶಿಸಿರುವ ನೆಟ್ ಫ್ಲಿಕ್ಸ್ ಸರಣಿ 'ಸ್ಟೋರೀಸ್ ಬೈ ರಬೀಂದ್ರನಾಥ್ ಟ್ಯಾಗೋರ್' ಟಾಗೋರರ ಆಶಯವನ್ನು ದೃಶ್ಯರೂಪದಲ್ಲಿ ಪ್ರೇಕ್ಷಕನ ಮುಂದೆ ತೆರೆದಿಡುತ್ತದೆ.