ಸಿನಿಮಾ ಸುದ್ದಿನಿಯಮ ಮೀರಿ ಪಬ್ ನಲ್ಲಿ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಇತರ 8 ಮಂದಿ ವಿಚಾರಣೆಗೆ ಹಾಜರು
ಇತ್ತೀಚಿಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಟೇರ' ಸಿನಿಮಾ ಯಶಸ್ಸು ಸಂಭ್ರಮಿಸಲು ಒರಾಯನ್ ಮಾಲ್ ಬಳಿಯ ಜೆಟ್ ಲ್ಯಾಗ್ ಪಬ್ ನಲ್ಲಿ ನಿಯಮ ಉಲ್ಲಂಘಿಸಿ ಮುಂಜಾನೆಯವರೆಗೂ ಪಾರ್ಟಿ ಆಯೋಜಿಸಿದ್ದ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಎಂಟು ಮಂದಿಯೊಂದಿಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು.