ರಾಜ್ಯವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲೆ ದೋಸೆ-ಫಿಲ್ಟರ್ ಕಾಫಿ ಸವಿದ ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್
ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ಬಂದಿದ್ದ ಸ್ಟಾರ್ಬಕ್ಸ್ ಸಹ-ಸಂಸ್ಥಾಪಕ (Starbucks co founder) ಜೆವ್ ಸೀಗಲ್ (Zev Siegl) ನಿನ್ನೆ ಸಾಯಂಕಾಲ ಬೆಂಗಳೂರಿನ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್ ಗೆ (Vidyarthi Bhavan) ಹೋಗಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದಿದ್ದಾರೆ.