standoff

ಲಡಾಕ್ ಲಡಾಯಿ: ಭಾರತ-ಚೀನಾ ಮಧ್ಯೆ ಈ ವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಿರೀಕ್ಷೆ
ಭಾರತ ಮತ್ತು ಚೀನಾ ಪೂರ್ವ ಲಡಾಕ್ ನ ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸುವ ಸಾಧ್ಯತೆಯಿದೆ, ಲಡಾಕ್ ನ ಗಡಿಭಾಗದ ಸಂಘರ್ಷ ಸ್ಥಳಗಳಿಂದ ಎರಡೂ ದೇಶಗಳು ಸೈನಿಕರನ್ನು ಹಿಂತೆಗೆದುಕೊಳ್ಳುವ ಕುರಿತು ಸರಣಿ ಮಾತುಕತೆಗಳ ಮುಂದುವರಿದ ಭಾಗ ಇದು ಆಗಿರಲಿದೆ.

ಭಾರತ- ಚೀನಾ ಗಡಿ ವಿವಾದ: ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇವೆ- ಜೈಶಂಕರ್
ಪೂರ್ವ ಲಡಾಖ್ ನಲ್ಲಿ ಚೀನಾದೊಂದಿಗಿನ ಏಳು ತಿಂಗಳ ಗಡಿ ವಿವಾದದಲ್ಲಿ ಭಾರತವನ್ನು ಪರೀಕ್ಷಿಸಲಾಗುತ್ತಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಭಾರತ ಮೆಟ್ಟಿ ನಿಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಲಡಾಕ್ ಸಂಘರ್ಷ ಮಧ್ಯೆ ಅಂಧ್ರ ಪ್ರದೇಶದಲ್ಲಿ ಭಾರತದ ಗಡಿಗೆ ಹತ್ತಿರವಾಗಿ ರೈಲ್ವೆ ಸಂಪರ್ಕ ಜಾಲ ನಿರ್ಮಾಣ ಆರಂಭಿಸಿದ ಚೀನಾ!
ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.

ಚೀನಾ ಆಟಿಕೆ ಬಿಡಿ, ಚನ್ನಪಟ್ಟಣದ ಆಟಿಕೆಗಳನ್ನು ಬದುಕಿಸಿ!
ಚೀನಾ ಅಥವಾ ಚನ್ನಾ? ಚೀನಾ ಆಟಿಕೆಗಳ ಬಹಿಷ್ಕಾರ ಮತ್ತು ಚನ್ನಪಟ್ಟಣದ ಆಟಿಕೆಗಳನ್ನು ಬದುಕಿಸಲು ವ್ಯಾಪಕಒತ್ತಾಯಗಳು ಕೇಳಿಬರುತ್ತಿದೆ. ಚೀನಾ ಜೊತೆಗಿನ ವಿವಾದ ಇದೀಗ ಅವನತಿ ಅಂಚಿನಲ್ಲಿರುವ ಈ ಅಟಿಕೆಗಳ ಉಳಿವಿಗೆ ನೆರವಾಗಿದೆ. ಚನ್ನಪಟ್ಟಣದ ಆಟಿಕೆಗಳ ಉದ್ಯಮ ಗತ ಕಾಲದ ವೈಭವಕ್ಕೆ ಮರಳಲು ಇದು ದೊಡ್ಡ ಅವಕಾಶ ಮಾಡಿಕೊಟ್ಟಿದೆ.

ಭಾರತದ ಮೇಲೆ ಕೆಟ್ಟ ಕಣ್ಣು ಹಾಕಿದರೆ ತಕ್ಕ ಶಾಸ್ತಿ: ಚೀನಾ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಚೀನಾ ಆ್ಯಪ್ ಗಳ ಬ್ಯಾನ್ ನ್ನು 'ಡಿಜಿಟಲ್ ಸ್ಟ್ರೈಕ್ ' ಎಂದು ಕರೆದಿರುವ ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ, ಯಾರಾದರೂ ಕೆಟ್ಟ ಕಣ್ಣು ಹಾಕಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಚೀನಾದ ವಿರುದ್ಧ ಹರಿಹಾಯ್ದಿದ್ದಾರೆ.

ಭಾರತ-ಚೀನಾ ಗಡಿ ಸಂಘರ್ಷವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ: ಅಮೆರಿಕ
ಭಾರತ ಮತ್ತು ಚೀನಾ ಸೇನಾಪಡೆಗಳಿಂದ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದು ಎರಡೂ ದೇಶಗಳ ಸೈನಿಕರು ಹುತಾತ್ಮರಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿದ ಅಮೆರಿಕ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ ಎಂದು ಹೇಳಿದೆ.

ಭಾರತ-ಚೀನಾ ರಾಜತಾಂತ್ರಿಕ, ಮಿಲಿಟರಿ ಮಾರ್ಗಗಳ ಮೂಲಕ ಮಾತುಕತೆಯಲ್ಲಿ ತೊಡಗಿವೆ: ಭಾರತೀಯ ಸೇನೆ
ಭಾರತ ಮತ್ತು ಚೀನಾದ ಗಡಿ ಭಾಗಗಳಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳನ್ನು ಎದುರಿಸಲು ಭಾರತ ಮತ್ತು ಚೀನಾದ ಅಧಿಕಾರಿಗಳು ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ತೊಡಗಿಸಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಸಲು ನೇಪಾಳದಿಂದ ಸಮಿತಿ ರಚನೆ
ಭಾರತದೊಂದಿಗಿನ ರಾಜಕೀಯ-ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ನೇಪಾಳ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.

