ದೇಶಪತ್ರಕರ್ತರ ಸೋಗಿನಲ್ಲಿದ್ದ ವ್ಯಕ್ತಿಗಳಿಂದ ಅತೀಕ್ ಅಹ್ಮದ್ ಹತ್ಯೆ; ಪತ್ರಕರ್ತರಿಗಾಗಿ ಎಸ್ಒಪಿ ಸಿದ್ಧಪಡಿಸಲು ಕೇಂದ್ರ ನಿರ್ಧಾರ
ಪ್ರಯಾಗ್ರಾಜ್ನಲ್ಲಿ ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಹತ್ಯೆಗೈದ ಮೂವರು ದಾಳಿಕೋರರು ಮಾಧ್ಯಮದವರಂತೆ ನಟಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಸುರಕ್ಷತೆ ಮತ್ತು ಭದ್ರತೆಗಾಗಿ ಎಸ್ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಸಿದ್ಧಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.