ದೇಶಹೊಸ ರೇಷನ್ ಕಾರ್ಡ್ ಮಾದರಿ ಸಿದ್ಧಪಡಿಸಿದ ಕೇಂದ್ರ, ಅದನ್ನು ಅನುಸರಿಸುವಂತೆ ರಾಜ್ಯಗಳಿಗೆ ಸೂಚನೆ
ಒಂದು ದೇಶ ಒಂದು ತೆರಿಗೆ(ಜಿಎಸ್ ಟಿ) ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 'ಒಂದು ದೇಶ, ಒಂದು ಪಡಿತರ ಚೀಟಿ' ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಈ ಸಂಬಂಧ ಹೊಸ ರೇಷನ್ ಕಾರ್ಡ್ ಮಾದರಿಯನ್ನು ಸಿದ್ಧಪಡಿಸಿದೆ. ಅಲ್ಲದೆ ರಾಜ್ಯಗಳು ಸಹ ಹೊಸ ರೇಷನ್ ಕಾರ್ಡ್ ನೀಡುವಾಗ ಈ ಮಾದರಿ ಅನುಸರಿಸುವಂತೆ ಸೂಚಿಸಿದೆ.