ರಾಜ್ಯಶಿಷ್ಟಾಚಾರ ನಿಯಮಗಳ ಪರಿಷ್ಕರಿಸಿದ ಸರ್ಕಾರ: ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾಗಳಲ್ಲಿ ನಟಿಸಲು ನಿಷೇಧಕ್ಕೆ ಚಿಂತನೆ
ಕರ್ನಾಟಕ ರಾಜ್ಯ ನಾಗರೀಕ ಸೇವೆ (ನಡವಳಿಕೆ) ನಿಯಮ 2020 ಕರಡನ್ನು ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದು, ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ, ಸಾಂಸ್ಕೃತಿ ಹಾಗೂ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಿಷೇಧ ಹೇರುವ ಪ್ರಸ್ತಾಪವನ್ನು ಕರಡುವಿನಲ್ಲಿ ಮಾಡಿದೆ ಎಂದು ತಿಳಿದುಬಂದಿದೆ.