ರಾಜ್ಯಬೆಂಗಳೂರು: ಜಗಳದ ವೇಳೆ ಚಾಕುವಿನಿಂದ ಇರಿದು ಗಂಡನ ಕೊಲೆ ಮಾಡಿದ ಪತ್ನಿಯ ಬಂಧನ
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯೊಬ್ಬರು ತಮ್ಮ ಗಂಡನ ಎದೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುರುವಾರ ವರದಿಯಾಗಿದೆ. ಮೃತ ವ್ಯಕ್ತಿಯನ್ನು 27 ವರ್ಷದ ಉಮೇಶ್ ದಾಮಿ ಎಂದು ಗುರುತಿಸಲಾಗಿದ್ದು, ಆರೋಪಿ ಪತ್ನಿ ಮನೀಶಾ ದಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.