ಕ್ರಿಕೆಟ್ಭಾರತದ ವಿರುದ್ಧ ಹೀನಾಯ ಸೋಲು; ವಜಾಗೊಂಡಿದ್ದ ಕ್ರಿಕೆಟ್ ಮಂಡಳಿಯನ್ನು ಮರುಸ್ಥಾಪಿಸಿದ ಶ್ರೀಲಂಕಾ ಕೋರ್ಟ್
ಐಸಿಸಿ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಡವು ಹೀನಾಯ ಸೋಲನುಭವಿಸಿದ ಬಳಿಕ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ ಶ್ರೀಲಂಕಾದ ಕ್ರೀಡಾ ಸಚಿವರು ಹೊರಡಿಸಿದ್ದ ಆದೇಶವನ್ನು ಮಂಗಳವಾರ ನ್ಯಾಯಾಲಯ ರದ್ದುಗೊಳಿಸಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಕ್ರಿಕೆಟ್ ಮಂಡಳಿಯನ್ನು ತಾತ್ಕಾಲಿಕವಾಗಿ ಮರುಸ್ಥಾಪಿಸಿದೆ.