ರಾಜ್ಯಎಸಿಬಿ ದಾಳಿಗೊಳಗಾದ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಮೌಲ್ಯ ಆದಾಯ ಮೂಲಕ್ಕಿಂತ 4 ಪಟ್ಟು ಹೆಚ್ಚು!
ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ರಾಜ್ಯದ 68 ಕಡೆಗಳಲ್ಲಿ 15 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸಂಪತ್ತಿನ ಮೇಲೆ ದಾಳಿ ನಡೆಸಿದಾಗ ಹಲವು ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಈ 15 ಮಂದಿ ಅಧಿಕಾರಿಗಳಲ್ಲಿ ಕೆಲವರಂತೂ ತಮ್ಮ ಆದಾಯದ ಮೂಲದ ಶೇಕಡಾ 400ರಿಂದ 500ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ಶೋಧ ವೇಳೆ ಬೆಳಕಿಗೆ ಬಂದಿದೆ.