ರಾಜ್ಯಐದು ವರ್ಷಗಳಲ್ಲಿ 14 ತಹಶೀಲ್ದಾರ್ಗಳನ್ನು ಕಂಡ ಶಿವಮೊಗ್ಗದ ಸೊರಬ ತಾಲೂಕು, ಅಭಿವೃದ್ಧಿ ಕುಂಠಿತ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ 14ನೇ ತಹಶೀಲ್ದಾರ್ ಡಾ. ಮೋಹನ್ ಭಸ್ಮೆ ಅವರನ್ನು ಧಾರವಾಡಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ತಾಲೂಕಿನಲ್ಲಿ ಮತ್ತೊಮ್ಮೆ ನಿರ್ವಾತ ಸೃಷ್ಟಿಸಿದೆ. ಈ ಕ್ರಮದಿಂದ ಸೊರಬ ತಾಲೂಕಿನಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 14 ತಹಶೀಲ್ದಾರರು ಬದಲಾವಣೆ ಕಂಡಿದ್ದಾರೆ.