ದೇಶಮಣಿಪುರ: ಲೂಟಿ ಮಾಡಿದ್ದ 790 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಭದ್ರತಾ ಪಡೆ
ಮಣಿಪುರದ ಭದ್ರತಾ ಪಡೆಗಳು ಮೇ 3 ರಂದು ಭುಗಿಲೆದ್ದ ಜನಾಂಗೀಯ ಗಲಭೆಯ ಸಂದರ್ಭದಲ್ಲಿ ಪೊಲೀಸರು ಮತ್ತು ಇತರ ಸಂಸ್ಥೆಗಳಿಂದ ಲೂಟಿ ಮಾಡಿದ 790 ಅತ್ಯಾಧುನಿಕ ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು 10,648 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.