ರಾಜ್ಯಕೈದಿಗಳ ಬಾಯಲ್ಲಿ ಸ್ವಚ್ಛತೆಯ ಹಾಡು: ಶಿವಮೊಗ್ಗ ಕಾರಾಗೃಹ ಜೈಲುಹಕ್ಕಿಗಳಿಂದ ನೂತನ ಪ್ರಯೋಗ
ಈ ಹಾಡಿನ ವಿಶೇಷವೆಂದರೆ, ನಗರದ ಕಸ ಸಂಗ್ರಹಿಸುವ ವಾಹನಗಳಲ್ಲಿ ಕೇಳಿಬರುವ ಈ ಜಿಂಗಲ್ಗಳಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳೇ ಧ್ವನಿ ನೀಡಿದ್ದಾರೆ. ಕಸ ಸಂಗ್ರಹ ವಾಹನಗಳಿಗೆ ಹೊಸ ಸಂಗೀತದ ಸ್ಪರ್ಶ ನೀಡುವ ಉದ್ದೇಶದಿಂದ, ಜೈಲು ಕೈದಿಗಳೇ ಹಾಡುಗಳನ್ನು ರಚಿಸಿ ಹಾಡಿದ್ದಾರೆ.