Socio-economic survey

ಸಮೀಕ್ಷೆ ಗಡುವು ವಿಸ್ತರಣೆ: ಬೆಂಗಳೂರಿನ ನಾಗರಿಕ, ಕಂದಾಯ ಸೇವೆಗಳು ವ್ಯತ್ಯಯ
ಬೆಂಗಳೂರು ಮಹಾನಗರ ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಮೀಕ್ಷೆ ವಿಸ್ತರಣೆ: ತಮ್ಮ ಇಲಾಖೆಗಳಲ್ಲಿ ಬಾಕಿ ಉಳಿದಿರುವ ರಾಶಿ-ರಾಶಿ ಕೆಲಸ ನೆನೆದು ಸರ್ಕಾರಿ ನೌಕರರಿಗೆ ತಲೆಬಿಸಿ!
ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿತ್ತು, ಆದರೆ ರಾಜ್ಯದ ಹಲವು ಭಾಗಗಳಲ್ಲಿ ಕೇವಲ ಶೇಕಡಾ 60 ರಷ್ಟು ಗಣತಿ ಪೂರ್ಣಗೊಂಡಿದೆ.

ನಾವು ಹಿಂದುಳಿದ ಜಾತಿಗೆ ಸೇರಿಲ್ಲ: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಾರಾಯಣಮೂರ್ತಿ- ಸುಧಾಮೂರ್ತಿ ನಿರಾಕರಣೆ!
ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ.

ಜಾತಿ ಸಮೀಕ್ಷೆಗೆ 7ನೇ ತರಗತಿ ವಿದ್ಯಾರ್ಥಿಗಳ ಬಳಕೆ: ಗಂಭೀರ ಆರೋಪ
ಸರ್ಕಾರ ಸಮೀಕ್ಷೆ ಮಾಡುವ ಮೂಲಕ ಜಾತಿವಾದವನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಧಾರ್ಮಿಕ ವ್ಯತ್ಯಾಸಗಳ ಬೀಜಗಳನ್ನು ಬಿತ್ತುತ್ತಿದ್ದಾರೆ.

Greater Bengaluru Authority ವ್ಯಾಪ್ತಿಯಲ್ಲಿ ಇಂದಿನಿಂದ ಜಾತಿಗಣತಿ: 17 ಸಾವಿರ ಸಿಬ್ಬಂದಿಗಳ ನಿಯೋಜನೆ; ಅನಾವಶ್ಯಕ ಗೈರಾದವರಿಗೆ ಕಠಿಣ ಕ್ರಮದ ಎಚ್ಚರಿಕೆ!
ಕಳೆದ ಸೆ.22 ರಿಂದ ಬೆಂಗಳೂರು ನಗರ ಹೊರತು ಪಡಿಸಿ ರಾಜ್ಯಾದ್ಯಂತ ಕರ್ನಾಟಕ ಹಿಂದುಳಿದ ವರ್ಗ ಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಭರದಿಂದ ಸಾಗಿದೆ. 11 ದಿನದ ಬಳಿಕ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸಲಾಗುತ್ತಿದೆ.

ಅಕ್ಟೋಬರ್ 3 ರಿಂದ ಬೆಂಗಳೂರಿನಲ್ಲಿ ಜಾತಿವಾರು ಸಮೀಕ್ಷೆ: ಮಹೇಶ್ವರ ರಾವ್
ಸುಮಾರು 22,000 ಸರ್ಕಾರಿ ನೌಕರರು ಸಮೀಕ್ಷೆ ನಡೆಸಲಿದ್ದಾರೆ. ನಗರದ ಪ್ರತಿ ಮನೆಗೆ ಭೇಟಿ ನೀಡಿ, ಮನೆ ಮುಖ್ಯಸ್ಥರಿಂದ ಮಾಹಿತಿಯನ್ನು ಸಂಗ್ರಹಿಸಿ ಸಮೀಕ್ಷೆ ನಡೆಸಲಿದ್ದಾರೆ.

ಜಾತಿ ಗಣತಿಗೆ ತಡೆ ಕೋರಿ ಅರ್ಜಿ; ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್
ನ್ಯಾಯಾಲಯವು ಆರಂಭದಲ್ಲಿ ದಸರಾ ರಜೆಯ ನಂತರ ಈ ವಿಷಯವನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಿತು. ಆದರೆ ಅರ್ಜಿದಾರರ ಪರ ವಕೀಲರು ಈ ವಿಷಯವು ತುರ್ತು ಇದೆ ಮತ್ತು ತಡೆ ನೀಡಬೇಕು ಎಂದು ಕೋರಿದರು.

ಹೊಸ SES ಗೆ ಬೆಂಬಲ: ತಮ್ಮ ಸಮುದಾಯದ ನಿಖರ ಜನಸಂಖ್ಯೆ ತಿಳಿಯಲು ಡಿಜಿಟಲ್ ಜನಗಣತಿಗೆ ಒಕ್ಕಲಿಗ-ಲಿಂಗಾಯತರ ಸಿದ್ಧತೆ
ನ್ಯಾಯ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನಿವೃತ್ತ ನ್ಯಾಯಾಧೀಶರು ಸಮೀಕ್ಷೆಯ ನೇತೃತ್ವ ವಹಿಸಬೇಕೆಂದು ಕೆಂಚಪ್ಪಗೌಡ ಸೂಚಿಸಿದ್ದಾರೆ.

ಕಾಂತರಾಜ ಆಯೋಗದ ಸಾಮಾಜಿಕ-ಆರ್ಥಿಕ ಸಮೀಕ್ಷೆ ತಿರಸ್ಕರಿಸಿದ ವೀರಶೈವ-ಲಿಂಗಾಯತ ಮಹಾಸಭೆ
ಕೆಲ ದಿನಗಳ ಹಿಂದೆ ಒಕ್ಕಲಿಗ ಸಮಾಜದ ಸಭೆ ನಡೆದ ಕೆಲವೇ ದಿನಗಳಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಮತ್ತು ಕಾಂತರಾಜ ಆಯೋಗದ ವರದಿ ಬಗ್ಗೆ ಚರ್ಚಿಸಲು ನಿನ್ನೆ ಗುರುವಾರ ವೀರಶೈವ-ಲಿಂಗಾಯತ ಸಮುದಾಯದ ಸಭೆ ಏರ್ಪಟ್ಟಿತ್ತು. ಸಭೆಯಲ್ಲಿ ಕಾಂತರಾಜ ಆಯೋಗ ವರದಿಯನ್ನು ತಿರಸ್ಕರಿಸಲಾಯಿತು.

