ರಾಜ್ಯಸಾಮಾಜಿಕ ಅಂತರವಲ್ಲ, ದೈಹಿಕ ಅಂತರ ಕಾಯ್ದುಕೊಳ್ಳಬೇಕು: ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್
ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು, ಕೌಟುಂಬಿಕ ವಾತಾವರಣವನ್ನು ಇನ್ನಷ್ಟು ಸಹನೀಯಯಗೊಳಿಸಲು, ವ್ಯಸನಮುಕ್ತ ಬದುಕಿನೆಡೆಗೆ ಸಾಗಲು ಇದು ಸಕಾಲ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ-ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ಹೇಳಿದ್ದಾರೆ.