social distancing

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪ್ರಯಾಣಿಕರನ್ನು ಕೆಎಸ್ ಆರ್ ರೈಲು ನಿಲ್ದಾಣದಿಂದ ಹೊರಗೆ ಕಳಿಸಿದ ರೈಲ್ವೆ!
ತಮ್ಮ ಊರುಗಳಿಗೆ ತೆರಳುವುದಕ್ಕಾಗಿ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಸಾವಿರಾರು ಮಂದಿಯನ್ನು ಸಾಮಾಜಿಕ ಅಂತರವಿಲ್ಲ ಎಂಬ ಕಾರಣಕ್ಕಾಗಿ ಪ್ರಯಾಣಿಕರನ್ನು ರೈಲ್ವೆ ನಿಲ್ದಾಣದಿಂದ ಹೊರಗೆ ಕಳಿಸಿ ಆವರಣದಲ್ಲಿ ಕಾಯುವಂತೆ ಮಾಡಲಾಗಿದೆ.

ಕೋವಿಡ್-19: 'ಒಬ್ಬ ಸೋಂಕಿತ 406 ಮಂದಿಗೆ ಸೋಂಕು ಅಂಟಿಸಬಹುದು; ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ ದೊಡ್ಡ ದುರಂತ ಕಾದಿದೆ'
ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ ಕೇವಲ 30 ದಿನಗಳ ಅಂತರದಲ್ಲಿ ಬರೊಬ್ಬರಿ 406 ಮಂದಿಗೆ ಸೋಂಕು ಪ್ರಸರಣ ಮಾಡಬಹುದು.. ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದರೇ ದೊಡ್ಡ ದುರಂತಕ್ಕೆ ಎಡೆ ಮಾಡಿಕೊಟ್ಟಂತೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಕುಂಭಮೇಳ 2021: ಎರಡನೇ ಶಾಹಿ ಸ್ನಾನದ ವೇಳೆ ವ್ಯಕ್ತಿಗಳ ನಡುವೆ ಅಂತರ ಅಸಾಧ್ಯ; ಅಧಿಕಾರಿ ಹೇಳಿಕೆ
ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ.

ಸಾಮಾಜಿಕ ಅಂತರ, ಬ್ಯಾಕ್ಟೀರಿಯಾ ನಿವಾರಕ ಉಪಕರಣ, 10 ಪರದೆಗಳು: ಸಂಸತ್ ಅಧಿವೇಶನಕ್ಕೆ ಸಿದ್ಧತೆ
ಕೊರೋನಾ ಭೀತಿಯ ನಡುವೆಯೇ ಸಂಸತ್ ನ ಮುಂಗಾರು ಅಧಿವೇಶನಕ್ಕೂ ಸಿದ್ಧತೆ ನಡೆದಿದೆ.

ಕೇರಳದಲ್ಲಿ ಒಂದು ವರ್ಷ ಕಾಲ ಫೇಸ್ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕೇರಳದಲ್ಲಿ ಒಂದು ವರ್ಷಗಳ ಕಾಲ ಫೇಸ್ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಕೈ ಶಾಸಕರ ಪುತ್ರನ ವಿವಾಹದಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ, ಮಾಸ್ಕ್ ಧರಿಸದೇ ಪಾಲ್ಗೊಂಡ ಆರೋಗ್ಯ ಸಚಿವ ಶ್ರೀರಾಮುಲು!
ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದರೂ ಜನನಾಯಕರೇ ಸಾಮಾಜಿಕ ಅಂತರವನ್ನು ಮರೆತು ಶುಭ ಸಮಾರಂಬಗಳನ್ನು ನಡೆಸುತ್ತಿರುವುದು ಮಾತ್ರ ವಿಪರ್ಯಾಸ. ಬಳ್ಳಾರಿ ಜಿಲ್ಲೆ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರದ ನಿಯಮಾವಳಿಯನ್ನು ಗಾಳಿಗೆ ತೂರಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಸಾಮಾಜಿಕ ಅಂತರ ಜಾರಿ ಒಂದು ದಿನ ವಿಳಂಬವಾದರೆ 2.4 ದಿನ ಹೆಚ್ಚಾಗಿ ಕೊರೋನ ಜೊತೆ ಬದುಕಿ: ಅಧ್ಯಯನ ವರದಿ!
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ವಿಳಂಬ ಮಾಡಿದರೆ 2.4 ದಿನ ಹೆಚ್ಚಾಗಿ ಕೊರೋನಾ ಜೊತೆ ಹೆಚ್ಚು ಇರಬೇಕಾಗುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ನರೇಗಾ ಕೆಲಸದಲ್ಲಿ ಸಾಮಾಜಿಕ ಅಂತರ: ಒಂದೇ ವೇಳೆ ಐದಕ್ಕಿಂತ ಹೆಚ್ಚು ಜನರು ಕೆಲಸ ಮಾಡುವಂತಿಲ್ಲ!
ಕೌಶಲ್ಯ ರಹಿತ ಕಾರ್ಮಿಕರಿಗೆ ಕೆಲಸದ ಅಗತ್ಯವಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಸರ್ಕಾರ ನೀಡಲು ಸರ್ಕಾರ ನಿರ್ಧರಿಸಿದೆ. ಆದಾಗ್ಯೂ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದೇ ಸಮಯದಲ್ಲಿ ಐದು ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಹಾಜರಾಗಬಾರದು ಎಂದು ಸರ್ಕಾರ ಹೇಳಿದೆ

2022ರ ವರೆಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು: ಹಾವರ್ಡ್ ವಿಜ್ಞಾನಿಗಳು
ಕೇವಲ ಲಾಕ್ ಡೌನ್ ನಿಂದ ಮಾತ್ರ ಮಾರಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ, 2022ರ ವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಈ ಜಗತ್ತು ವೈರಸ್ ಸೋಂಕಿನಿಂದ ವಿಮುಕ್ತಿ ಪಡೆಯಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

