ಜೀವನಶೈಲಿಒತ್ತಡವಷ್ಟೇ ಅಲ್ಲ, ನಿದ್ರಾಹೀನತೆಗೆ ಒಟಿಟಿ, ಸಾಮಾಜಿಕ ಜಾಲತಾಣಗಳೂ ಕಾರಣ!
ಕುಂಭಕರ್ಣನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವನನ್ನು ಎಬ್ಬಿಸುವದಕ್ಕೆ ರಾವಣನ ಸೈನ್ಯವೇ ಒದ್ದಾಡಿದರೂ ಆತ ಮೇಲೇಳುತ್ತಿರಲಿಲ್ಲ. ಈಗಿನವರೂ ಒಂದು ರೀತಿಯಲ್ಲಿ ಕುಂಬಕರ್ಣರೇ...! ಆದರೆ ಎಬ್ಬಿಸಲಿಕ್ಕಲ್ಲ, ನಿದ್ರಿಸುವುದಕ್ಕೇ ಹರಸಾಹಸ ಪಡಬೇಕು. ಲೋಕವೆಲ್ಲಾ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲದಂತಾಗಿದೆ.