Sitharam Yechuri

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ: ಸೀತಾರಾಮ್ ಯೆಚೂರಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆದ ಭೂಮಿಪೂಜೆ ಪಕ್ಷಪಾತದ, ರಾಜಕೀಯ ಉದ್ದೇಶಗಳಿಗೆ ಜನರ ಧಾರ್ಮಿಕ ಭಾವನೆಗಳ ಬೆತ್ತಲೆ ಶೋಷಣೆಯಾಗಿದ್ದು, ಇದು ಭಾರತೀಯ ಸಂವಿಧಾನದ ತತ್ವ, ಆಶಯ, ನಂಬಿಕೆ, ಉತ್ಸಾಹಗಳನ್ನು ಉಲ್ಲಂಘಿಸುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಭೇಟಿಯಿಂದ ಭಾರತಕ್ಕೆ ಏನೂ ಲಾಭವಿಲ್ಲ: ಸುಬ್ರಹ್ಮಣ್ಯನ್ ಸ್ವಾಮಿ, ಸೀತಾರಾಮ್ ಯೆಚೂರಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯಿಂದ ಅಮೆರಿಕದ ಆರ್ಥಿಕತೆಗೆ ಲಾಭವೇ ಹೊರತು ನಮಗೇನೂ ಉಪಯೋಗವಿಲ್ಲ ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ.

ದೆಹಲಿಯಲ್ಲಿ ಪ್ರಧಾನಿ ಮೋದಿ ಭಾಷಣ ಸಂಪೂರ್ಣ ಅಸತ್ಯಗಳಿಂದ ಕೂಡಿ ಹಾದಿತಪ್ಪಿಸುವಂತಿತ್ತು: ಸೀತಾರಾಮ್ ಯೆಚೂರಿ
ದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ಚುನಾವಣಾ ಭಾಷಣ ಅಸತ್ಯಗಳು, ಅರೆ-ಸತ್ಯಗಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳಿಂದ ತುಂಬಿದೆ, ಅದು ಎನ್ ಆರ್ ಸಿ ಬಗ್ಗೆಯಾಗಿರಬಹುದು, ಸಿಎಎ ಅಥವಾ ಬಂಧನ ಕೇಂದ್ರಗಳ ಶಿಬಿರಗಳ ಬಗ್ಗೆ ಇರಬಹುದು. ನಿಜಸಂಗತಿಗಳು ತದ್ವಿರುದ್ಧವಾಗಿವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.

ಕಾಶ್ಮೀರಕ್ಕೆ ಹೋಗಿ ಬಂದ ಮೇಲೆ ಸುಪ್ರೀಂ ಕೋರ್ಟ್ ಗೆ ವರದಿ ನೀಡುವೆ: ಸೀತಾರಾಮ್ ಯೆಚೂರಿ
ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನಾಳೆ ಅಲ್ಲಿಗೆ ಭೇಟಿ ನೀಡಲಿದ್ದಾರೆ.

