SIT Investigation

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: SIT ತನಿಖೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ- ಸಿಎಂ ಸಿದ್ದರಾಮಯ್ಯ
'ಮೇ 31ರಂದು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಇದರಲ್ಲಿ ನಾಲ್ಕು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳು ಇದ್ದಾರೆ. ತನಿಖೆ ಅತ್ಯಂತ ದಕ್ಷವಾಗಿ, ವಸ್ತುನಿಷ್ಠವಾಗಿ ನಡೆಯುತ್ತಿದ್ದು ನನಗೆ ತನಿಖೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ'

ಸಿಬಿಐ ತನಿಖೆ ಏಕೆ? SIT ಅಧಿಕಾರಿಗಳ ಮೇಲೆ ನಂಬಿಕೆಯಿದೆ, ಯಾರ ಹಸ್ತಕ್ಷೇಪವಿಲ್ಲ: ಸಿಎಂ ಸಿದ್ದರಾಮಯ್ಯ
ಇಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಸಿಬಿಐಗೆ ನೀಡಿದ್ದ ಡಿ ಕೆ ರವಿ ಕೇಸು ಏನಾಯಿತು, ಇಂದು ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯ ಮಾಡುವವರು ಹಿಂದೆ ಟೀಕೆ ಮಾಡಿದ್ದರು. ನನಗೆ ಎಸ್ ಐಟಿ ತನಿಖೆ ಮೇಲೆ ಸಂಪೂರ್ಣ ನಂಬಿಕೆಯಿದೆ, ಅವರು ಸೂಕ್ತ ತನಿಖೆ ಮಾಡಿ ವರದಿ ಸಲ್ಲಿಸುತ್ತಾರೆ ಎಂದರು.

ಕೆಲವೇ ಹೊತ್ತಿನಲ್ಲಿ ಎಸ್ ಐಟಿ ತನಿಖೆ ಆರಂಭ: ಗೃಹ ಸಚಿವ ಡಾ ಜಿ ಪರಮೇಶ್ವರ್, ಜರ್ಮನಿ ಪ್ರವಾಸದಲ್ಲಿ ಸಂಸದ ಪ್ರಜ್ವಲ್ ರೇವಣ್ಣ?

ಐಎಂಎ ವಂಚನೆ ಪ್ರಕರಣ: ಮನ್ಸೂರ್ ಖಾನ್ ನಿಂದ 1 ಕೋಟಿ ಲಂಚ ಪಡೆದಿದ್ದ ಬಂಧಿತ ಜಿಲ್ಲಾಧಿಕಾರಿ
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಬೆಂಗಳೂರು ಜಿಲ್ಲಾಧಿಕಾರಿ ಡಿಸಿ ವಿಜಯ್ ಶಂಕರ್ ಮನ್ಸೂರ್ ಖಾನ್ ನಿಂದ 1 ಕೋಟಿ ಲಂಚ ಪಡೆದಿದ್ದರು ಎನ್ನಲಾಗಿದೆ.

ಐಎಂಎ ವಂಚನೆ ಪ್ರಕರಣ: ಹೂಡಿಕೆದಾರರ ಮೇಲೆ ಪ್ರಭಾವ ಬೀರಲು ಹಣ ಪಡೆದಿದ್ದ ಮೌಲ್ವಿ ಬಂಧನ!
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಇದೀಗ ಹೂಡಿಕೆದಾರರ ಮೇಲೆ ಪ್ರಭಾವ ಬೀರಲು ಮನ್ಸೂರ್ ಅಲಿಖಾನ್ ರಿಂದ ಹಣ ಪಡೆದಿದ್ದ ಆರೋಪದ ಮೇರೆಗೆ ಮುಸ್ಲಿಮ್ ಧರ್ಮ ಗುರುವೊಬ್ಬರನ್ನು ಬಂಧಿಸಿದ್ದಾರೆ.

