ಸಿನಿಮಾ ಸುದ್ದಿಸೈಮಾ ಅವಾರ್ಡ್ಸ್ 2022: ಅತ್ಯುತ್ತಮ ನಟ ಪುನೀತ್ ರಾಜ್ಕುಮಾರ್, ಅತ್ಯುತ್ತಮ ನಟಿ ಆಶಿಕಾ ರಂಗನಾಥ್
10ನೇ ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ವಿಜೇತರನ್ನು ಘೋಷಿಸಲಾಯಿತು. ಯುವರತ್ನ ಸಿನಿಮಾದಲ್ಲಿನ ನಟನೆಗಾಗಿ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.