ರಾಜ್ಯನಾಮಫಲಕಗಳಲ್ಲಿ ಬೆಳಗಾಂವ, ಬೆಳಗಾಮ್ ಬೇಡ; ಬೆಳಗಾವಿ ಬಳಸಿ: ಸರ್ಕಾರದ ಆದೇಶ ಬೆನ್ನಲ್ಲೇ ಅಂಗಡಿಗಳಿಗೆ ಪಾಲಿಕೆ ನೋಟಿಸ್!
ಬೆಳಗಾವಿ ಮಹಾನಗರದ ಎಲ್ಲ ಅಂಗಡಿ/ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಳಾಸದಲ್ಲಿ ಬೆಳಗಾಂವ, ಬೆಳಗಾಮ್ ಅಲ್ಲದೆ, ಬೆಳಗಾವಿ ಎಂದು ನಮೋದಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಇದರ ಬೆನ್ನಲ್ಲೇ ಬೆಳಗಾವಿ ಮಹಾನಗರ ಪಾಲಿಕೆಯು ಸುಮಾರು 2000 ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.