ರಾಜ್ಯಮೊಟ್ಟೆ ಎಸೆತ, ಮಾಂಸಹಾರ ಸೇವನೆ ವಿವಾದ: ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಹೆಚ್ಚಿನ ಭದ್ರತೆ, ಮೆಟಲ್ ಡಿಟೆಕ್ಟರ್ ಅಳವಡಿಕೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದ ವೇಳೆ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ದಿನೇ ದಿನೇ ಕಾವೇರುತ್ತಿದೆ. ಈ ಮಧ್ಯೆ ಇದೇ 26ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಕೊಡಗು ಜಿಲ್ಲಾ ಎಸ್ಪಿ ಕಚೇರಿಗೆ ಮುತ್ತಿಗೆ 'ಮಡಿಕೇರಿ ಚಲೋ'ಗೆ ನಿಷೇಧಾಜ್ಞೆ ಕಾರ್ಮೋಡ ಕವಿದಿದೆ.