ರಾಜ್ಯಆರ್ಥಿಕ ಸಂಕಷ್ಟ: ಸಿದ್ದಾರ್ಥ್ ಒಡೆತನದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪನಿ ಬಂದ್
ಪ್ರಖ್ಯಾತ “ಕಾಫಿ ಡೇ’ಯ ಅಂಗಸಂಸ್ಥೆ ಡಾರ್ಕ್ ಫಾರೆಸ್ಟ್ ಫರ್ನಿಚರ್ (ಡ್ಯಾಪ್ಕೋ) ಕಂಪನಿಗೆ ಸೋಮವಾರ ಶಾಶ್ವತವಾಗಿ ಬೀಗ ಹಾಕಲಾಗಿದೆ. “ಕಾಫಿ ಡೇ’ ಸಂಸ್ಥಾಪಕ ಸಿದ್ದಾರ್ಥ್ ಹೆಗಡೆ ಸಾವಿನ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ.